ವಿಜಯಪುರ: ಮರಿಯೊಂದಿಗೆ ಚಿರತೆ ಪ್ರತ್ಯಕ್ಷ; ನಾಗರದಿನ್ನಿ ಗ್ರಾಮಸ್ಥರಲ್ಲಿ ಆತಂಕ ಮಹಾದೇವ ಕೋಲ್ಕಾರ್ ಎಂಬುವವರ ಜಮೀನಿನ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ಬಳಿ ಸೋಮವಾರ ರಾತ್ರಿ ಚಿರತೆ ಹಾಗೂ ಮರಿಗಳು ಕಾಣಿಸಿಕೊಂಡಿವೆ. ತಮ್ಮ ಜಮೀನಿನ ಬಳಿ ಕಾಡು ಪ್ರಾಣಿಗಳನ್ನು ಗಮನಿಸಿದ ಸ್ಥಳೀಯ ರೈತ ಸುರೇಶ ಕುಬಕಡ್ಡಿ ಅವರು ಈ ದೃಶ್ಯಗಳನ್ನು ಮೊದಲು ವರದಿ ಮಾಡಿದ್ದಾರೆ.ಮಹಾದೇವ ಕೋಲ್ಕಾರ್ ಎಂಬುವವರ ಜಮೀನಿನ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ತಾಯಿ ಚಿರತೆ ಮತ್ತು ಅದರ ಮರಿಗಳ ಚಲನವಲನ ಜಮೀನಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ಪ್ರದೇಶದಲ್ಲಿ ಅವುಗಳ ಇರುವಿಕೆಯನ್ನು ದೃಢಪಡಿಸಿದೆ. ಇದೀಗ ಕಾಡು ಪ್ರಾಣಿಗಳ ಹಾವಳಿ ಇಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿ ಬಸವರಾಜ ಕೊಣ್ಣೂರ, ಕೊಲ್ಹಾರ ತಹಸೀಲ್ದಾರ್‌, ಎಸ್‌.ಎಸ್‌.ನಾಯಕಲಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. (@)ಒಂದು ವೇಳೆ ಕಾಡು ಪ್ರಾಣಿಗಳ ಚಲನವಲನ ಕಂಡು ಬಂದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜನರ ಬಳಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆದಷ್ಟು ಬೇಗ ಪ್ರಾಣಿಗಳನ್ನು ಹಿಡಿಯಲು ಅಗತ್ಯ ಕ್ರಮಗಳನ್ನು ದಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.